
15th April 2025
ಶಹಾಪುರ, ಗೊಂಬೆಕುಣಿತ, ಕಣಿ ಹಲಿಗಿಕುಣಿತ, ಹಾಗೂ ನಾನಾ ವೇಶಭೂಷಣಗಳಿಂದ ಮಕ್ಕಳ ಕೊಲಾಟ, ಡೊಳ್ಳು ಕುಣಿತ, ಹಲಿಗೆ ನಿನಾದಗಳ ಮಧ್ಯದಲ್ಲಿ ರಾಷ್ಟಿçÃಯ ಹೆದ್ದಾರಿಯೂದ್ದಕ್ಕೂ ವಿಶ್ವರತ್ನ ಡಾ,ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆಯ ಭವ್ಯ ಮೇರವಣಿಗೆಯಲ್ಲಿ, ಡಾ,ಬಿ,ಆರ್,ಅಂಬೇಡ್ಕರವರ ೧೩೪ ನೆಯ ಜಯಂತೋತ್ಸವ ಸಂಭ್ರಮದ ಸಡಗರಗಳಿಂದ ಜರುಗಿತು, ಬುದ್ದನಗರದ ಡಾ, ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆಯಿಂದ ಸಾಗಿದ ಮೇರವಣಿಗೆ ಹಳೆ ಬಸ್ ನಿಲ್ದಾಣ ಮತ್ತು ಬಸವೇಶ್ವರ ವೃತ್ತದಿಂದ ಸಿಪಿಎಸ್, ಶಾಲಾ ಮೈದಾನದವರೆಗೂ ಸಾಗಿತ್ತು, ಸಂಧರ್ಭದಲ್ಲಿ
ಅನೇಕ ಗ್ರಾಮಗಳಿಂದ ದಲಿತಪರ ಸಂಘಟನೆಗಳು, ಕಾರ್ಯಕರ್ತರು ಪ್ರಗತಿಪರ ಚಿಂತಕರು, ಮಹಿಳೆಯರು ಮಕ್ಕಳು ಯುವಕರು ಆಗಮಿಸಿ ಮೇರವಣಿಗೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು, ಈ ಕಾರ್ಯಕ್ರಮಕ್ಕೆ ಶಹಾಪುರ ನಗರ ಠಾಣಾ ಪಿ,ಐ ಸಾಹೇಬಗೌಡ ಪಾಟೀಲ್ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ ಕೈಗೊಂಡಿದ್ದರು,
ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಇನ್ನುಳಿದ ಮೂವರನ್ನು ಸಹ ಅಮಾನತು ಮಾಡಿ: ಬಂಗ್ಲೆ ಮಲ್ಲಿಕಾರ್ಜುನ್
ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಏ.೨೦ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ